13 ಎಲೆಯ ರಮ್ಮಿಯಲ್ಲಿ ಗೆಲ್ಲುವುದರ ಕುರಿತ ಸಲಹೆಗಳು

Rummy Tips and Tricks

13 ಎಲೆಯ ರಮ್ಮಿಯಲ್ಲಿ ಗೆಲ್ಲುವುದರ ಕುರಿತ ಸಲಹೆಗಳು

ನಿಮ್ಮ 13 ಎಲೆಯ ಆಟವನ್ನು ಸುಧಾರಿಸಲು ನೀವು ಮಾರ್ಗಗಳನ್ನು ಹುಡುಕುತ್ತಿದ್ದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ.ಸತ್ಯವೇನೆಂದರೆ ನೀವು ಹೆಚ್ಚು ಹೆಚ್ಚು ಆಡಿದಷ್ಟೂ ಆಟದಲ್ಲಿ ಉತ್ತಮರಾಗುತ್ತೀರಿ. ಆದರೆ ನಮ್ಮ ಸಲಹೆಗಳು ನೀವು ಬೇರೆಯ ಆಟಗಾರರಿಗಿಂತ ಒಂದು ಹೆಜ್ಜೆ ಮುಂದಿರಲು ನಿಮಗೆ ಸಹಾಯ ಮಾಡುತ್ತವೆ. ಹೆಚ್ಚು ಗೆಲ್ಲಲು ಇನ್ನಷ್ಟು ಉತ್ತಮವಾಗಿ ಆಡಿ!

ಪ್ರತಿಬಾರಿ ರಮ್ಮಿ ಆಟದಲ್ಲಿ ಗೆಲ್ಲಲು ತಂತ್ರಗಳು:

 • ನಿಮ್ಮ ಆದ್ಯತೆಗಳನ್ನು ಸರಿಯಾಗಿ ನೋಡಿಕೊಳ್ಳಿ ಅಂದರೆ ಒಂದು ಶುದ್ಧ ಸಿಕ್ವೆನ್ಸ್ ಜೋಡಿಸುವುದು ಮುಖ್ಯ ಎಂದರ್ಥ. ಒಮ್ಮೆ ಇದು ನಿಮ್ಮಲ್ಲಿ ಇದೆಯೆಂದಾದರೆ, ನೀವು ಬೇರೆಯ ವಿಷಯಗಳ ಕಡೆ ಗಮನ ಹರಿಸಬಹುದು.
 • ಇತರ ಆಟಗಾರರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿ ಮತ್ತು ಜಾಗರೂಕರಾಗಿರಿ. ತೆರೆದ ಎಲೆಗಳ ರಾಶಿಯಿಂದ ಇತರ ಆಟಗಾರರು ಏನನ್ನು ತ್ಯಜಿಸುತ್ತಾರೆ ಮತ್ತು ಏನನ್ನು ಆರಿಸಿಕೊಳ್ಳುತ್ತಾರೆ ಎನ್ನುವುದು ನಿಮಗೆ ಅವರ ಆಟದ ಬಗ್ಗೆ ಒಂದು ಸ್ಪಷ್ಟ ಚಿತ್ರಣವನ್ನು ಕೊಡುತ್ತದೆ. ಇದರಿಂದ ನಿಮಗೆ ಯಾವುದು ಸರಿಯಾದ ಎಲೆ, ಯಾವುದನ್ನು ಇಟ್ಟುಕೊಳ್ಳಬೇಕು, ಯಾವುದನ್ನು ತ್ಯಜಿಸಬೇಕು ಎನ್ನುವುದು ಯಾವಾಗಲೂ ತಿಳಿಯುತ್ತದೆ.
 • ಯಾವಾಗಲೂ ಹೆಚ್ಚಿನ ಪಾಯಿಂಟನ್ನು ಹೊಂದಿರುವ ಎಲೆಗಳು ಇಲ್ಲದಂತೆ ನೋಡಿಕೊಳ್ಳಿ. ಇದರಿಂದ ನಿಮ್ಮ ಎದುರಾಳಿ ನಿಮಗಿಂತ ಮೊದಲು ಶೋ ಮಾಡಿದರೆ, ನಿಮ್ಮಲ್ಲಿ ಡೆಡ್ ವುಡ್ ಪಾಯಿಂಟ್ಗಳು ಖಂಡಿತವಾಗಿಯೂ ಕಡಿಮೆಯಾಗುತ್ತವೆ.
 • ಒಂದು ಸಿಕ್ವೆನ್ಸ್ ನಲ್ಲಿ 3 ಕ್ಕಿಂತ ಹೆಚ್ಚು ಎಲೆ ಇರಬಹುದು ಎಂಬುದನ್ನು ನೆನಪಿಡಿ. ಈ ಸಂಗತಿ ಅನೇಕ ಆಟಗಾರರಿಗೆ ತಿಳಿದಿರುವುದಿಲ್ಲ.
 • ಯಾವಾಗಲೂ ಗಮನವಿಡಿ ಮತ್ತು ಒಪ್ಪವಾದ ಎಲೆಗಳನ್ನು ಸಂರಹಿಸಿ. ಇವುಗಳು ಸಿಕ್ವೆನ್ಸ್ ನಲ್ಲಿ ಸುಲಭವಾಗಿ ಜೋಡಿಸಬಹುದಾದ ಎಲೆಗಳಾಗಿವೆ. ಉದಾಹರಣೆಗೆ, ಯಾವುದೇ ಸೂಟ್ ನ 7 ರ ಎಲೆಯನ್ನು ಅದೇ ಸೂಟ್ ನ 5 ಮತ್ತು 6 ರರೊಂದಿಗೆ ಜೋಡಿಸಬಹುದು ಮತ್ತು ಅದೇ ಸೂಟ್ ನ 8 ಮತ್ತು 9 ರೊಂದಿಗೆ ಸಹ ಸೇರಿಸಿ ಜೋಡಿಸಬಹುದು.
 • ರಮ್ಮಿ ಆಟದಲ್ಲಿ ಜೋಕರ್ ಗಳು ಮುಖ್ಯ ಮತ್ತು ನೀವು ಆಟದಲ್ಲಿ ಜೋಕರ್ ಗಳನ್ನು ಉತ್ತಮವಾಗಿ ಬಳಸಿಕೊಳ್ಳುವ ಕಡೆಗೆ ನಿಮ್ಮ ಗಮನವಿರಬೇಕು. ಹೆಚ್ಚಿನ ಪಾಯಿಂಟ್ ಗಳ ಸಿಕ್ವೆನ್ಸ್ ಅನ್ನು ಅಥವಾ ಸೆಟ್ ಅನ್ನು ಮಾಡಲು ಯಾವಾಗಲೂ ಜೋಕರ್ ಎಲೆಯನ್ನು ಬಳಸಿ. ಇನ್ನೊಂದು ವಿಷಯ, ಸಹಜ ಸಿಕ್ವೆನ್ಸ್ ನಲ್ಲಿ ಜೋಕರನ್ನು ಬಳಸಬಾರದು.
 • ಒಂದು ಸಿಕ್ವೆನ್ಸ್ ಮಾಡಲು ಒಂದು ನಿರ್ದಿಷ್ಟ ಎಲೆಗಾಗಿ ಕಾಯುತ್ತಾ ಕೂರುವುದು ಜಾಣತನವಲ್ಲ. ನಿಮ್ಮ ಎಲೆಗಳನ್ನು ನೀವು ಸತತವಾಗಿ ನೋಡುತ್ತಿರಬೇಕು ಮತ್ತು ಬದಲಾವಣೆ ಮಾಡಲು ಅವುಗಳ ಮರುತುಲನೆ ಮಾಡುತ್ತಿರಬೇಕಾಗುತ್ತದೆ.
 • ನೀವು ಎಲೆಗಳನ್ನು ಜೋಡಿಸುವಾಗ, ಅದನ್ನು ಸುಲಭವಾಗಿ ಆಡಲು ಸಾಧ್ಯವಾಗುವಂತೆ ಮಾಡಿ. ಅದನ್ನು ಮಾಡಲು ಒಂದು ಮಾರ್ಗವೆಂದರೆ ಒಂದು ಬಣ್ಣದ ಎಲೆಗಳ ಪಕ್ಕ ಬೇರೆಯ ಬಣ್ಣದ ಎಲೆಗಳನ್ನು ಜೋಡಿಸುವುದು. ಈ ರೀತಿ ಮಾಡುವುದರಿಂದ ಎಲೆಯನ್ನು ತೆಗೆದುಕೊಳ್ಳುವಾಗ ಮತ್ತು ತ್ಯಜಿಸುವಾಗ ನಿಮಗೆ ಗೊಂದಲವಾಗುವುದಿಲ್ಲ.
 • ಎಲೆಗಳನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳಬೇಡಿ. ಮಾಡಬೇಕಾದ ಒಂದು ಜಾಣತನದ ಕೆಲಸ ಎಂದರೆ ಆದಷ್ಟು ಬೇಗ ಬಳಸದ ಎಲೆಗಳನ್ನು ತ್ಯಜಿಸುತ್ತಾ ಹೋಗುವುದು, ವಿಶೇಷವಾಗಿ ಹೆಚ್ಚು ಪಾಯಿಂಟುಗಳಿರುವ ಎಲೆಗಳನ್ನು.

ರಮ್ಮಿ ಗೆಲ್ಲುವ ತಂತ್ರಗಳು

ರಮ್ಮಿಯಲ್ಲಿ ಗೆಲ್ಲುವುದು ಎಂದರೆ ಆಟದ ಕೌಶಲ್ಯಗಳನ್ನು ಬೆಳೆಸುವುದು ಎನ್ನುವುದು ನಮಗೆಲ್ಲರಿಗೂ ತಿಳಿದಿದೆ. ಇಂಡಿಯನ್ ರಮ್ಮಿ ಆನ್ ಲೈನ್ ನಲ್ಲಿ ಆಡಲು ನಿಮಗೆ ಬೇಕಿರುವ ನಿಪುಣತೆ ಎಂದರೆ ನಿಮ್ಮ ಎಲೆಗಳ ಮೌಲ್ಯಮಾಪನ ಮಾಡುವುದು ಮತ್ತು ಅವುಗಳನ್ನು ಉತ್ತಮವಾಗಿ ಅನುಕೂಲಕ್ಕೆ ಬಳಸುವುದು ಮತ್ತು ಎದುರಾಳಿಯ ನಡೆಯನ್ನು ಅರ್ಥ ಮಾಡಿಕೊಳ್ಳುವುದಾಗಿದೆ.ಉತ್ತಮ ಎದುರಾಳಿ ಏನು ಮಾಡುತ್ತಾನೆ ಎನ್ನುವುದನ್ನು ನೀವು ಖಚಿತವಾಗಿ ಹೇಳಬಹುದು. ಈ ಕೆಳಗಿನ ಕೆಲವು ಉಪಾಯಗಳನ್ನು ಬಳಸಿಕೊಂಡು ನೀವು ಅವನ/ಅವಳ/ಅವರ ದಾರಿ ತಪ್ಪಿಸಬಹುದು.

 • ತೆರೆದ ರಾಶಿಯಿಂದ ಒಂದು ಸಿಕ್ವೆನ್ಸ್ ಗಾಗಿ ನೀವು ಎಲೆಗಳನ್ನು ತೆಗೆದುಕೊಳ್ಳುವಾಗ, ನಿಮ್ಮ ಎದುರಾಳಿ/ಗಳಿಗೆ ನಿಮ್ಮ ಆಟದ ಬಗ್ಗೆ ಸುಳಿವು ನೀಡುತ್ತಿದ್ದೀರಿ ಎನ್ನುವ ಅಂಶ ನಿಮಗೆ ತಿಳಿದಿರಬೇಕು. ನೀವು ಸಿಕ್ವೆನ್ಸ್ ನ ಒಂದು ಭಾಗವಾಗಿರುವ ಒಂದು ಎಲೆಯನ್ನು (ಅದು ನಿಮ್ಮಲ್ಲಿ ಎರಡಿರಬಹುದು) ತ್ಯಜಿಸಿ ಅವರಿಗೆ ಗೊಂದಲವಾಗುವಂತೆ ಮಾಡಬಹುದು.
 • ನಿಮಗೆ ಅಗತ್ಯವಿರುವ ಎಲೆಗಳನ್ನು ಒದಗಿಸುವಂತೆ ನಿಮ್ಮ ಎದುರಾಳಿಗೆ ಮೋಡಿ ಮಾಡಬಹುದು. ಒಂದು ಸೆಟ್ ಮಾಡಲು ನೀವು ನಿಜವಾಗಿಯೂ ಒಂದು ಎಲೆಯನ್ನು ಹುಡುಕುತ್ತಿದ್ದರೆ ಇದು ಕೆಲಸ ಮಾಡುತ್ತದೆ. ಉದಾಹರಣೆಗೆ ನೀವು ಮೂರು ಗುಲಾಮ ಎಲೆಗಳನ್ನು ಜೋಡಿಸಿದ್ದೀರಿ ಮತ್ತು ನಿಮ್ಮಲ್ಲಿ ಹಾರ್ಟ್ಸ್ ಮತ್ತು ಕ್ಲಬ್ಸ್ ನ ಗುಲಾಮ ಎಲೆಗಳಿವೆ. ಆಗ ನೀವು ಸ್ಪೇಡ್ ನ ರಾಣಿ ಎಲೆಯನ್ನು ತ್ಯಜಿಸದರೆ ನಿಮ್ಮ ಎದುರಾಳಿಗೆ ಗೊಂದಲವಾಗಿ ಸ್ಪೇಡ್ ನ ಗುಲಾಮ ಎಲೆಯನ್ನು ತ್ಯಜಿಸಬಹುದು. ನಿಮಗೆ ಬೇಕಾಗಿರುವುದೂ ಅದೇ! ಇದು ನಿಮ್ಮ ಎದುರಾಳಿಯ ದಾರಿ ತಪ್ಪಿಸಿ ನಿಮಗೆ ಬೇಕಾದ ಎಲೆಯನ್ನು ತ್ಯಜಿಸುವಂತೆ ಮಾಡುವುದು. ಇದನ್ನು ಗಾಳ ಹಾಕುವುದು ಮತ್ತು ಮೀನು ಹಿಡಿಯುವುದು ಎಂದು ಕರೆಯುತ್ತಾರೆ.

*ಮೇಲೆ ಹೇಳಿರುವ ಎಲೆ ಆಟದ ಸೂಚನೆಗಳು ಮತ್ತು ಉಪಾಯಗಳು ಅಥವಾ ತಂತ್ರಗಳನ್ನು ಮಾರ್ಗ ಸೂಚಿಗಳನ್ನಾಗಿ ಬಳಸಬೇಕು ಅಷ್ಟೇ ಹೊರತು ಅವು ನಿಮಗೆ ಆಟದಲ್ಲಿ ಗೆಲುವು ತಂದು ಕೊಡುತ್ತವೆ ಎಂಬ ಭರವಸೆ ಬೇಡ. ಇವುಗಳನ್ನು ಅನುಸರಿಸುವುದರಿಂದ ಯಾವುದೇ ಪ್ರತಿಕೂಲ ಪರಿಣಾಮಗಳಾದರೆ ಅದಕ್ಕೆ ಕ್ಲಾಸಿಕ್ ರಮ್ಮಿ ಯಾವುದೇ ಜವಾಬ್ದಾರಿಗೆ ಹೊಣೆಯಾಗುವುದಿಲ್ಲ.